ನೆನಪಿನಂಗಳದಿಂದ-೨

ನನ್ನೂರಿನ ಮಳೆಯ ನೆನಪು..

ಆಗುಂಬೆಯ ನಂತರ ಅತಿ ಹೆಚ್ಚು ಮಳೆ ಬೀಳುವ ಪ್ರದೇಶ ಎನಿಸಿಕೊಂಡಿರುವ ಕುದುರೆಮುಖ ನನ್ನೂರು. ವರ್ಷದಲ್ಲಿ ಆರು ತಿಂಗಳು ಬಿಸಿಲಿದ್ದರೆ, ಇನ್ನಾರು ತಿಂಗಳು ಭೋ ಎಂದು ಸೋನೆ ಮಳೆ ಸುರಿಯುತಿತ್ತು.
ಆ ಮಳೆಯ ದಿನಗಳಲ್ಲಿ ಶಾಲೆಗೆ ಹೋಗುವುದೇ ಒಂದು ಹರಸಾಹಸ. ಅಪ್ಪನ ಬಜಾಜ್ ಚೇತಕ್ನಲ್ಲಿ ಹಳದಿ ಹಾಗೂ ನೀಲಿ ಬಣ್ಣದ ರೇನ್‌ಕೋಟ್ ಧರಿಸಿ ನಾನು ಮತ್ತು ತಂಗಿ ಶಾಲೆಗೆ ಹೋಗುತ್ತಿದ್ದೆವು. ಆ ರೈನ್ ಕೋಟ್ನಲ್ಲಿ ನಾವು ಪುಟ್ಟ ಪೆಂಗ್ವಿನ್ ಮರಿಗಳಂತೆ ಕಾಣುತ್ತಿದ್ದೆವು.

ಸಾಯಂಕಾಲ ನಾವಿಬ್ಬರು ಶಾಲೆ ಬಿಟ್ಟು ಬಸ್ನಲ್ಲಿ ಮನೆಗೆ ತೆರಳುತ್ತಿದ್ದೆವು.  ಬಸ್ಸ್ಟಾಂಡ್ ಇಂದ  ಮನೆಗೆ ಬರುವಾಗ ಹತ್ತಾರು ತುಂಬಿ ಹರಿವ ತೊರೆಯಲ್ಲಿ ಆಟ ಆಡಿಕೊಂಡು ಬಂದರೇನೆ ನೆಮ್ಮದಿ. ಮನೆಯಲ್ಲಿ  ಶೋಬಕ್ಕ ಕೆಂಡದಲ್ಲಿ ಹಪ್ಪಳ ಮತ್ತು ಹಲಸಿನ ಬೀಜವನ್ನು ಸುಟ್ಟು ಇಡುತ್ತಿದ್ದಳು. ಅಮ್ಮ ಬಿಸಿ ಅನ್ನ ಹುಳಿ ಕಲಸಿ ಕೈ ತುತ್ತಿಡುತ್ತಿದಳು. ಹೊಟ್ಟೆ ಪಾಡು ಮುಗಿದ ಮೇಲೆ ನಮಗೆ ಮನೆಯ ಮುಂದೆ ಹರಿಯುವ ಭದ್ರ ನದಿಯಲ್ಲಿ ನೀರು ಎಷ್ಟು ತುಂಬಿದೆ ಎಂದು ನೋಡೋ ಕುತೂಹಲ. ಛತ್ರಿ ಹಿಡಿದು ಹೊಳೆಯ ಬುಡಕ್ಕೆ ಓಡಿ ಹೋಗಿ ಭೋರ್ಗರೆದು ಹರಿವ ನೀರನ್ನು ನೋಡಿ ಖುಷಿ ಪಡುತ್ತಿದ್ದೆವು.

ಅಷ್ಟರಲ್ಲಿ ನಮ್ಮ ಮನೆಯ ದನಗಳು ಜಿಗಣೆ ಕಾಲಿನಲ್ಲಿ ಕೊಟ್ಟಿಗೆಗೆ ಓಡಿ ಬರುತ್ತಿದ್ದವು. ಆ ಜಿಗಣೆಗಳು ರಕ್ತ ಹೀರಿ ಟ್ಯೂಮ್ ಆಗಿರುತ್ತಿದ್ದವು. ಚಳಿಯಲ್ಲಿ ಬಂದ ದನಗಳಿಗೆ ಅಜ್ಜಿ ಬಿಸಿ ಬಿಸಿ ಕಲಗಚ್ಚು ಹಾಗು ಹಿಂಡಿ ಕೊಡುತ್ತಿದ್ದರು.

ನಮ್ಮದು ಮಣ್ಣಿನಲ್ಲಿ ನಿರ್ಮಿತ ಶೀಟಿನ ಮನೆಯಾಗಿದ್ದಿತು. ಗಾಳಿ ಮಳೆಯ ಆರ್ಭಟಕ್ಕೆ ಎಲ್ಲಿ ಮಾಡು ಹಾರೀ ಹೋಗುತ್ತದೋ ಅನ್ನೋ ಆತಂಕ ಸದಾ ಕಾಡುತ್ತಿತ್ತು. ಮಾಡು ತೂತಾಗಿ ನೀರು ಸುರಿದಲ್ಲೆಲ್ಲ ಸಾಲಾಗಿ ಪಾತ್ರೆ ಇಡುವ ಕ್ರಮ ಇತ್ತು. ಅಡುಗೆ ಮನೆಯ ಮಾಡು ಸೌದೆಯ ಹೊಗೆಯಿಂದ ಕಪ್ಪಾಗಿ ಮಳೆ ಬಿದ್ದಾಗ ಆ ಕಪ್ಪು ತುಪ್ಪವಾಗಿ ಸುರಿಯುತ್ತಿತ್ತು. ಅದಕ್ಕೆ ತುಪ್ಪ ಎಂದು ಯಾಕೆ ಕರೆಯುತ್ತಿದ್ದರೋ ನಾನರಿಯೆ. ಈಗ ವರ್ಷ ಪೂರ್ತಿ  ಸುರಿಯುವ ಮಳೆ ಆಗ ಒಂದು ದಿನ ಸುರಿಯುತ್ತಿತ್ತು.

Advertisements

4 thoughts on “ನೆನಪಿನಂಗಳದಿಂದ-೨

Add yours

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s

Create a free website or blog at WordPress.com.

Up ↑

%d bloggers like this: